ಡಾ. ದಾನಯ್ಯ ಕೌಟಗಿಮಠ ಅವರ ಮಾರ್ಗದರ್ಶನದಲ್ಲಿ 25 ವಿದ್ಯಾರ್ಥಿಗಳು ಕರ್ನಾಟಕ ಟಿಇಟಿ ಪರೀಕ್ಷೆಯಲ್ಲಿ ಯಶಸ್ವಿ

ಅಕ್ಕಲಕೋಟೆ :
ಇಲ್ಲಿನ ಕೆ.ಎಲ್.ಇ. ಮಂಗರೂಳೆ ಪ್ರೌಢಶಾಲೆ ಯ ಕನ್ನಡ ಶಿಕ್ಷಕರಾದ ಡಾ. ದಾನಯ್ಯ ಕೌಟಗಿಮಠ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಶಿಕ್ಷಕ ಅರ್ಹತಾ ಪರೀಕ್ಷೆ (ಕೆ ಟಿ ಇ ಟಿ) 2025ರಲ್ಲಿ 25 ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.
ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವತಿಯಿಂದ ಈ ಪರೀಕ್ಷೆಯನ್ನು 2025ರ ಡಿಸೆಂಬರ್ 7ರಂದು ಆಫ್‌ಲೈನ್ ವಿಧಾನದಲ್ಲಿ ನಡೆಸಲಾಗಿತ್ತು. ಪರೀಕ್ಷೆಯ ಫಲಿತಾಂಶವನ್ನು 2025ರ ಡಿಸೆಂಬರ್ 23ರಂದು, ಕೇವಲ 16 ದಿನಗಳೊಳಗೆ ಪ್ರಕಟಿಸಲಾಗಿದೆ.
ಡಾ. ದಾನಯ್ಯ ಕೌಟಗಿಮಠ ಅವರು ಯೂಟ್ಯೂಬ್ ಮಾಧ್ಯಮದ ಮೂಲಕ ಶಿಕ್ಷಕ ಅರ್ಹತಾ ಪರೀಕ್ಷೆಗಳ ಕುರಿತು ಪೂರ್ಣವಾಗಿ ಉಚಿತ ಹಾಗೂ ಗುಣಮಟ್ಟದ ಮಾರ್ಗದರ್ಶನವನ್ನು ನಿರಂತರವಾಗಿ ನೀಡುತ್ತಿದ್ದಾರೆ. ಅವರ ಮಾರ್ಗದರ್ಶನದ ಪ್ರಯೋಜನ ಪಡೆದು 25 ವಿದ್ಯಾರ್ಥಿಗಳು ಟಿಇಟಿ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.
ವಿಶೇಷವಾಗಿ ಗಮನಾರ್ಹ ಸಂಗತಿ ಎಂದರೆ, ಡಾ. ಕೌಟಗಿಮಠ ಅವರು ಸ್ವತಃ ದೇಶದ ವಿವಿಧ ರಾಜ್ಯಗಳಲ್ಲಿ 79 ಬಾರಿ ಸೆಟ್ ,ನೆಟ್ ಹಾಗೂ ಟಿ ಇ ಟಿ ಪರೀಕ್ಷೆಗಳನ್ನು ಉತ್ತೀರ್ಣರಾಗಿ ಜಾಗತಿಕ ದಾಖಲೆಯನ್ನು ಸ್ಥಾಪಿಸಿದ್ದಾರೆ. ತಮ್ಮ ಅನುಭವ, ಜ್ಞಾನ, ಮಾಹಿತಿ ಮತ್ತು ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಿ, ಅವರು ಕೂಡ ಯಶಸ್ಸು ಸಾಧಿಸಬೇಕೆಂಬ ಉದ್ದೇಶದಿಂದ ಯೂಟ್ಯೂಬ್ ಮೂಲಕ ಅವರು ನಿರಂತರವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರ ಸೆಟ್ ಪರೀಕ್ಷೆ 2025ರಲ್ಲಿ 29 ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಸೆಟ್ ಪರೀಕ್ಷೆ 2025ರಲ್ಲಿ 407 ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೆ ಒಟ್ಟು 1405 ವಿದ್ಯಾರ್ಥಿಗಳು ಸೆಟ್ , ನೆಟ್ ಮತ್ತು ಟಿ ಇ ಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಇದು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಪ್ರೇರಣೆಯಾಗಿದೆ.
ಕರ್ನಾಟಕ ಟಿಇಟಿ ಪರೀಕ್ಷೆಯಲ್ಲಿ
ಉತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿ :
ಸಂಗಮ್ಮ (ಯಾದಗಿರಿ)
ಖ್ಯಾಮಲಿಂಗ (ಕಲಬುರಗಿ)
ಸತೀಶ್ ಬಿರಾದಾರ (ಬೆಳಗಾವಿ)
ಮೇಘಾ (ಧಾರವಾಡ)
ಡಾ. ಪ್ರವೀಣ್ ಗುರವ್ (ಕನ್ನಡ ವಿಶ್ವವಿದ್ಯಾಲಯ, ಹಂಪಿ)
ಕಲಾವತಿ (ತುಮಕೂರು)
ಪೃಥ್ವಿರಾಜ್ ಸರ್ (ದಾವಣಗೆರೆ)
ಮಂಜುಶ್ರೀ ಕಿತ್ತೂರು (ಬೈಲಹೊಂಗಲ್)
ಮಣಿಕಮ್ಮ ಚೀಕಮಠ (ವಿಜಯಪುರ)
ಸೌರಭ್ ಪಾಟೀಲ್ (ಕಲಬುರಗಿ)
ಮಹಾದೇವ್ ಮಾನೆ (ಬೆಳಗಾವಿ)
ಅನಿಲ್ ಕುಮಾರ್ ಶೆಟ್ಟಿ (ಕಮಲಾಪುರ)
ಸೋಮನಾಥ್ ಕೊಡತೆ (ಇಂಡಿ)
ಸುನಿಲ್ ಕುಮಾರ್ ಜಿ. ಎಚ್. (ಚಿಕ್ಕಬಳ್ಳಾಪುರ)
ಚಂದ್ರಕಲಾ (ಬೆಂಗಳೂರು)
ಡಾ. ದ್ಯಾಮಾವಾ ಹಿರೇಮಣಿ (ಬಾಗಲಕೋಟೆ)
ವೆಂಕಟೇಶ್ವರಿ (ಯಾದಗಿರಿ)
ಜ್ಯೋತಿ ಹೆಬ್ಬಾಳಕರ (ಧಾರವಾಡ)
ಗಡ್ಡೆನ್ನ ಉಪ್ಪಾರ (ತಾಲಕೋಟೆ)
ಕೆಂಚಮ್ಮ ಟಿ. (ಹೊಸಪೇಟೆ)
ಚಂದ್ರಪ್ಪ ಕೆ. ಸಿ. (ಬಳ್ಳಾರಿ)
ಹನುಮೇಶ್ (ರಾಯಚೂರು)
ಸುಷ್ಮಾ ಗೋಳಗೇರಿಮಠ (ವಿಜಯಪುರ)
ಗಣೇಶ್ ಗೌಡ (ಧಾರವಾಡ)
ಡಾ. ದಾನಯ್ಯ ಕೌಟಗಿಮಠ ಅವರ ಈ ಮಹತ್ವದ ಹಾಗೂ ಶ್ಲಾಘನೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅವರ ಮಾರ್ಗದರ್ಶನದಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳು ಅಪಾರ ಲಾಭ ಪಡೆಯುತ್ತಿದ್ದಾರೆ.
Back to top button
×
No WhatsApp Number Found!