ಅಕ್ಕಲಕೋಟ : ಮಹಾರಾಷ್ಟ್ರ ಸೆಟ್ ಪರೀಕ್ಷೆ ಯಲ್ಲಿ ಡಾ. ದಾನಯ್ಯ ಕೌಟಗಿಮಠ ಅವರ ಮಾರ್ಗದರ್ಶನದಲ್ಲಿ ೨೬ ವಿದ್ಯಾರ್ಥಿಗಳು ಯಶಸ್ವಿ!
ಮಹಾರಾಷ್ಟ್ರ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ (ಏಮ್ ಎಚ ಸೆಟ್ ) ೨೦೨೫ ಅನ್ನು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಸೆಟ್ ವಿಭಾಗವು ಜೂನ್ 15, 2025 ರಂದು ನಡೆಸಿತ್ತು. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವಿದ್ಯಾರ್ಥಿಗಳಿಗೆ ತೆಗೆದುಕೊಳ್ಳಲಾದ ಈ ಮಹತ್ವದ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದೆ. ಈ ಫಲಿತಾಂಶದಲ್ಲಿ ಅಕ್ಕಲಕೋಟದ ಕೆ ಎಲ್ ಇ ಮಂಗರೂಳೆ ಪ್ರೌಢಶಾಲೆ ಕನ್ನಡ ಶಿಕ್ಷಕರಾದ ಡಾ. ದಾನಯ್ಯ ಕೌ ಟಗಿಮಠ ಅವರ ಮಾರ್ಗದರ್ಶನದಲ್ಲಿ ಒಟ್ಟು ೨೬ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಗಮನಾರ್ಹ ಸಾಧನೆಯಾಗಿದೆ.
ಡಾ. ಕೌಟಗಿಮಠ ಅವರು ದೇಶದ ವಿವಿಧ ರಾಜ್ಯಗಳಲ್ಲಿ 79 ಬಾರಿ ಸೆಟ್, ನೆಟ್, ಟಿಇಟಿ ಪರೀಕ್ಷೆಗಳನ್ನು ಉತ್ತೀರ್ಣಗೊಳ್ಳುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ತಮ್ಮ ಅನುಭವ, ಜ್ಞಾನ ಮತ್ತು ಕೌಶಲ್ಯ ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ತಲುಪಬೇಕೆಂದು ಅವರು ಯೂಟ್ಯೂಬ್ ಮೂಲಕ ಉಚಿತ ಆನ್‌ಲೈನ್ ಮಾರ್ಗದರ್ಶನ ನೀಡುತ್ತಿದ್ದಾರೆ. ಈಗಾಗಲೇ 52,400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವರ ಡಿಜಿಟಲ್ ಮಾರ್ಗದರ್ಶನದಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಪೇಪರ್–1 ಮತ್ತು ಪೇಪರ್–2 ಗೆ ಸಂಬಂಧಿಸಿದಂತೆ ಕನ್ನಡ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ೧೪೦೦ ಗುಣಮಟ್ಟದ ಉಪನ್ಯಾಸ ವೀಡಿಯೊಗಳು ವಿದ್ಯಾರ್ಥಿಗಳಿಗೆ ಲಭ್ಯವಿವೆ. ಆರ್ಥಿಕವಾಗಿ ಹಿಂದುಳಿದವರು, ಗೃಹಿಣಿಯರು, ಕಾರ್ಮಿಕರು, ಕೃಷಿಕರು, ಮೋಟಾರ್ ಮೆಕ್ಯಾನಿಕ್‌ಗಳು ಸೇರಿದಂತೆ ವಿವಿಧವರ್ಗದ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಲ್ಲಿ ಶ್ಲಾಘನೀಯ ಯಶಸ್ಸನ್ನು ದಾಖಲಿಸಿದ್ದಾರೆ.
—
ಉಲ್ಲೇಖ – ೧
ಸಾಂಗ್ಲಿ ಜಿಲ್ಲೆಯ ಆಟಪಾಡಿ ಗ್ರಾಮದ ಮೋಟಾರ್ ಮೆಕ್ಯಾನಿಕ್ ಇಲಾಹಿ ಇನಾಮದಾರ ಅವರು ಇಂಗ್ಲಿಷ್ ವಿಷಯದಲ್ಲಿ ಮಹಾರಾಷ್ಟ್ರ ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜದ ಮುಂದೆ ಸ್ಫೂರ್ತಿದಾಯಕ ಮಾದರಿಯನ್ನು ಸ್ಥಾಪಿಸಿದ್ದಾರೆ.
“ನಾನು ಸದಾ ಡಾ. ಡಿಜಿಕೆ ಸರ್ ಅವರ ವೀಡಿಯೊಗಳನ್ನು ನೋಡಿ ಪ್ರೇರಣೆ ಪಡೆಯುತ್ತಿದ್ದೆ. ಅವರ ಮಾರ್ಗದರ್ಶನವೇ ನನಗೆ ಈ ಯಶಸ್ಸು ತಂದುಕೊಟ್ಟಿದೆ,” ಎಂದು ಇನಾಮದಾರ ಸಂತೋಷ ವ್ಯಕ್ತಪಡಿಸಿದರು.
—
ಉತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿ :
೧. ಪ್ರಾ. ಶಶಿಕಾಂತ ಕಟ್ಯಪ್ಪ ಕೊಳಿ – ಹಿಂದಿ (ಹಂಜಗಿ, ಅಕ್ಕಲಕೋಟ)
೨. ಪ್ರಾ. ವಿನಾಯಕ ಕಲಶೆಟ್ಟಿ – ರಾಸಾಯನಶಾಸ್ತ್ರ (ಅಕ್ಕಲಕೋಟ)
೩. ಪ್ರಾ. ಪ್ರೀತಿ ಕೆಶೆಟ್ಟಿ – ಗಣಿತ (ಸೊಲ್ಲಾಪುರ )
೪. ಪ್ರಾ. ಸೀಮಾ ಬಿಲುರೇ – ರಸಾಯನಶಾಸ್ತ್ರ (ಸೊಲಾಪುರ)
೫. ಪ್ರಾ. ಮಹೇಶ್ ಕುಮಾರ್ ಬದ್ನೇ – ಶಿಕ್ಷಣ (ವಯಸ್ಸು 55, ಸಾತಾರಾ)
೬. ಪ್ರಾ. ಇಲಾಹಿ ಇನಾಮದಾರ – ಇಂಗ್ಲಿಷ್ (ಮೋಟಾರ್ ಮೆಕ್ಯಾನಿಕ್, ಆಟಪಾಡಿ)
೭. ಪ್ರಾ. ರಣಜಿತ ಜಗದೀಶ ಭಾಲೇರಾವ – ಇಂಗ್ಲಿಷ್ (ಬಾರ್ಷಿ)
೮. ಪ್ರಾ. ಸೂರ್ಯಕಾಂತ ವಸಂತ ಕ್ಷೀರಸಾಗರ್ – ಶಿಕ್ಷಣ (ವಿಟಾ)
೯. ಪ್ರಾ. ಸೂರಜ್ ಎಂ – ಇಂಗ್ಲಿಷ್ (ಬಾರ್ಷಿ)
೧೦. ಪ್ರಾ. ಸುನಿತಾ ವಿಶ್ವನಾಥ ಫುಲೆ – ಮರಾಠಿ (ಪುಣೆ)
೧೧. ಪ್ರಾ. ಅನುರಾಧಾ ಸೆಲೆನೋಫಿಲೆ – ಇಂಗ್ಲಿಷ್ (ಪುಣೆ)
೧೨. ಪ್ರಾ. ಜ್ಯೋತಿ ಶಿವಾಜಿ ಠಾಕರೆ – ಶಿಕ್ಷಣ (ಸಾಂಗ್ಲಿ)
೧೩. ಪ್ರಾ. ಸೋನಾಲಿ ಭಗತ್ – ಇಂಗ್ಲಿಷ್ (ಮುಂಬೈ)
೧೪. ಪ್ರಾ. ಹರ್ಷಲ್ ಸದಾಶಿವ ಚಿಂಚಗಾರೆ – ವಾಣಿಜ್ಯ (ನಾಗಪುರ)
೧೫. ಪ್ರಾ. ಮೇಘಾ ಗಾವುಡೆ – (ಸಂಗಮ್ನೇರ್)
೧೬. ಪ್ರಾ. ಶುಭಮ್ ಭಾಲೇರಾವ – ರಾಜ್ಯಶಾಸ್ತ್ರ (ಸಂಗಮ್ನೇರ್)
೧೭. ಪ್ರಾ. ಮಹೇಶ್ ವಿಠ್ಠಲ್ ಜಾಧವ – ಇಂಗ್ಲಿಷ್ (ನಾಂದೇಡ್)
೧೮. ಪ್ರಾ. ಪಲ್ಲವಿ ವಸಂತ ಬನಸೋಡೆ – ಇಂಗ್ಲಿಷ್ (ಛತ್ರಪತಿ ಸಂಭಾಜಿನಗರ)
೧೯. ಪ್ರಾ. ಗಣೇಶ್ ಸುನಿಲ್ ಉಫಾದೆ – ಸಮಾಜಶಾಸ್ತ್ರ (ಲಾತೂರ್)
೨೦. ಪ್ರಾ. ಸುನಿಲ್ ಎಚ್ – ಇಂಗ್ಲಿಷ್ (ಧುಳೆ)
೨೧. ಪ್ರಾ. ವೈಶಾಲಿ ಈಶ್ವರ ದವಣೆ – ಇಂಗ್ಲಿಷ್ (ಪುಣೆ)
೨೨. ಪ್ರಾ. ಸುಷ್ಮಾ ಕುಲಕರ್ಣಿ – ಇಂಗ್ಲಿಷ್ (ಧುಳೆ)
೨೩. ಪ್ರಾ. ರಂಜನಾ ರಾಹುಲ್ ಬಾಗಲ್ – ವಾಣಿಜ್ಯ (ವಿಟಾ)
೨೪. ಪ್ರಾ. ರವಿಕಾಂತ ಸೊಪಾನ ಥೋರವೆಯ – ರಸಾಯನಶಾಸ್ತ್ರ (ಇಂದಾಪುರ)
೨೫. ಪ್ರಾ. ಕೃಷ್ಣ ರಾಮಚಂದ್ರ ಭೋಸಲೆ – ಶಿಕ್ಷಣ (ಕೊಲ್ಹಾಪುರ)
೨೬. ಪ್ರಾ. ಗೋವಿಂದ ಶಿವದಾಸ್ ಬೋಂಬೀಲವಾಡ – ವಾಣಿಜ್ಯ (ಲಾತೂರ್)
—
ಡಾ. ದಾನಯ್ಯ ಕೌಟಗಿಮಠ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಧಿಸಿದ ಈ ವಿಜಯಗಾಥೆ ಅಕ್ಕಲಕೋಟ ತಾಲೂಕಿನಷ್ಟೇ ಅಲ್ಲ, ಮಹಾರಾಷ್ಟ್ರದ ಸಮಗ್ರ ಶೈಕ್ಷಣಿಕ ಕ್ಷೇತ್ರಕ್ಕೂ ಹೆಮ್ಮೆಯ ವಿಷಯವಾಗಿದೆ.
ಇತ್ತೀಚೆಗೆ ಕರ್ನಾಟಕ ಸೆಟ್ ಪರೀಕ್ಷೆಯಲ್ಲಿ 309 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈಗಾಗಲೇ ಒಟ್ಟು 1358 ವಿದ್ಯಾರ್ಥಿಗಳು ಸೆಟ್, ನೆಟ್ ಮತ್ತು ಟಿಇಟಿ ಪರೀಕ್ಷೆಗಳನ್ನು ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರೈಸಿದ್ದಾರೆ.
Back to top button
×
No WhatsApp Number Found!